News Cafe | Contaminated Water Supply In Raichur | HR Ranganath | June 17, 2022

2022-06-17 3

ರಾಯಚೂರಿನಲ್ಲಿ ನಗರಸಭೆಯ ಕಲುಷಿತ ನೀರು ಸೇವಿಸಿ 7 ಮಂದಿ ಮೃತಪಟ್ಟಿರುವ ನಿದರ್ಶನ ಜೀವಂತವಾಗಿರುವಾಗಲೇ ಕಲಬುರಗಿ ನಗರದಲ್ಲೂ ಇಂಥದ್ದೇ ಪ್ರಕರಣ ವರದಿಯಾಗಿದೆ. ಜಲಮಂಡಳಿ ಚರಂಡಿ ನೀರನ್ನೇ ಸರಬರಾಜು ಮಾಡ್ತಿದೆ. ಶುದ್ಧ ಹಾಗೂ 24*7 ನೀರು ಕೊಡಲು ಸರ್ಕಾರ ಎಲ್&ಟಿ ಕಂಪನಿ ಜೊತೆ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿತ್ತು. ಆದರೀಗ, ನಿತ್ಯ ಬಣ್ಣಬಣ್ಣದ ಚರಂಡಿ ನೀರು ಸರಬರಾಜಾಗ್ತಿದೆ. ನಗರಕ್ಕೆ ಪ್ರತಿನಿತ್ಯ 110 ಎಂಎಲ್‍ಡಿ ಶುದ್ಧ ಕುಡಿಯುವ ನೀರಿನ ಅಗತ್ಯತೆ ಇದೆ. ಆದರೆ 4 ನೀರಿನ ಘಟಕಗಳಲ್ಲಿ 70 ಎಂಎಲ್‍ಡಿ ನೀರು ಮಾತ್ರ ಶುದ್ಧೀಕರಣವಾಗುತ್ತಿದೆ. ಬಹುತೇಕ ನೀರಿನ ಪೈಪ್ ಲೈನ್‍ಗಳು ಚರಂಡಿಯಲ್ಲಿರುವುದರಿಂದ ಪೈಪ್‍ಗಳಲ್ಲಿ ಚರಂಡಿ ನೀರು ಸೇರುತ್ತಿದೆ. ಎಲ್&ಟಿ ಕಂಪನಿಗೆ ಕೇಳಿದ್ರೆ ಹಾರಿಕೆ ಉತ್ತರ ಕೊಡ್ತಿದ್ದಾರೆ.

#publictv #newscafe #hrranganath